Thursday 17 July, 2008

ಹೀಗೆ ಸುಮ್ಮನೆ ....


ಹುಂಬ
ವ್ಯಥೆಯೇ ಅದರ ಅರ್ಥವೂ ಗೊತ್ತಿಲ್ಲ
ನನ್ನಸ್ಟು ಸುಖವ ಸೂರೆಗೈದವರಿಲ್ಲ,
ನನ್ನ ಬಳಿ ಬರಲು ಚಿಂತೆಗೂ ಚಿಂತೆಯ ವಿಷಯ
ಏಕೆಂದರೆ ನಾನೆಂದರೆ ದುಃಖಕ್ಕೂ ಭಯ.

~~*~*~*~*~*~*~*~*~*~~*~*~*~*~*~*~


ಅರ್ಥವಿಲ್ಲ
ಹಸು, ಎಮ್ಮೆ,
ಹೆಣ್ಣ ಈದರೆ
ಪಡುವಿರೆಲ್ಲ ಸಂತೋಷವ
ಹೆಣ್ಣು, ಹೆಣ್ಣ
ಹಡೆದರೆ
ಪಡುವಿರೆತಕೆ ದುಃಖವ?!!!!!



ಹೃದಯದಿಂದ
ನಾ

Tuesday 15 July, 2008

ತೋಚಿದ್ದು ......ಗೀಚಿದ್ದು....

ನೀ
ನೋವಲ್ಲೆ ಕವಿತೆ
ಅರಳುವುದಂತೆ,
ನೀ ಸದಾ ಸುಖವನ್ನೇ
ನೀಡುತಿದ್ದರೆ
ಹೇಗೆ
ಬರೆಯಲಿ
ನಾ ಕವಿತೆ .


ನಾ-ಅವಳು
ನಾನೆಂದೆ
"ನಿನ್ನ ವಜ್ರವು ಸುಟ್ಟರೆ
ಇದ್ದಿಲು "
ಅವಳೆಂದಳು
"ನಿನ್ನ ಪುಸ್ತಕಕ್ಕೂ ಹಿಡಿಯುತ್ತೆ
ಗೆದ್ದಿಲು."

ಹೃದಯದಿಂದ
ನಾ



Saturday 12 July, 2008

"ಅವಳು"

ದಿನ ಶುಭದಿನ. ನನ್ನ ಜೀವನದ ಅತ್ಯಂತ ಸಂತೋಷದ ದಿನ. ಅನಿರೀಕ್ಷಿತವಾಗಿ ಅವಳು ಸಿಕ್ಕಳು, ಕನಸಿನಲ್ಲೂ ಕಂಡಿರಲಿಲ್ಲ ಈ ದಿನ ಸಿಗುವಳೆಂದು ಬರೀ ಕಾಣಲಿಲ್ಲ, ಕಂಡೂ ಕರೆದೂ ಮಾತನಾಡಿಸಿದಳು. ಮರೆಯಲಾರೆ ಈ ದಿನವ.

ನನ್ನ ಜೀವನದ ವಸಂತ ಚಿಗುರಿತು
ಕೋಗಿಲೆ ಗಾನದಂತೆ ನಿನ್ನ ಮಾತು ಕೇಳಿಸಿತು
ನಿನ್ನ ನುಡಿಗಳು ಹೃದಯವನು ತಾಕಿತು
ಮನಸೆಲ್ಲ ಆನಂದದಿಂದ ಅರಳಿತು .

ದಿನ ಲೇಟಾಗಿ ಏಳುವ ನಾನು ಈ ದಿನ ಬೆಳಗ್ಗೆ ಬೇಗನೆ ಎದ್ದೆ ಕಾರಣ ನೀನೇ ,ದುರ್ಗಕ್ಕೆ ಹೋಗುವ ನಿನ್ನ ಕಾಣುವ ಹಂಬಲ. ಓಡೋಡಿ ಬಂದೆ ಬಸ್ ಸ್ಟ್ಯಾಂಡ್ ಗೆ ಬಂದೆನೀನು ಕಾಣಲಿಲ್ಲ ನೀನು, ಸಪ್ಪಗಾಗಿತು ಮನಸು, ಎಲ್ಲಿ ನೀನು ಹೊರಟು ಹೋದೆಯೋ ಎಂದು, ಆದರು ಕಾದೆ. ಕೊನೆಗೂ ಬಂದೆ, ನಿನ್ನ ಕಂಡ ಕ್ಷಣ ಬಡಿಯಿತು ನನ್ನ ಹೃದಯ ನಿಮಿಷಕ್ಕೆ ನೂರು ಬಾರಿ.


ಅಪ್ಪ ಪೂನಾದಿಂದ ಫೋನ್ ಮಾಡಿದ್ದರು ದುರ್ಗಕ್ಕೆ ಹೋಗಿ ದುಡ್ಡು ಕಟ್ಟಿ ಬಾ ಎಂದರು. ಪ್ರಯಾಣ ಮಾಡಲು ಬೇಸರ ಅದರೂ ನೀನು ಹೋಗುವೆಯೆಲ್ಲ ಅದೇ ಖುಷಿ ಸರಿ ಎಂದು ತಡಮಾಡದೆ ಹೇಳಿದೆ. ಇಂದು ಸಹ ಬಗನೆ ಎದ್ದು ಬೇಗ ಬೇಗನೆ ರೆಡಿಯಾಗಿ ಬಂದು ನಿಂತೇ. ಯಥಾಪ್ರಕಾರ ನೀನಿನ್ನೂ ಬಂದಿರಲಿಲ್ಲ, ಅಲ್ಲೇ ಸನಿಹದ ಬೇಕರಿ ಬಳಿ ನೀನು ಬಂದರು ನೀನಗೆ ಕಾಣದ ಹಾಗೆ ನಿಂತೇ. ನೀನು ಬಂದು ಕಾಯುತ್ತ ಕುಳಿತೆ ಬಸ್ಸನ್ನ. ಅಂತು ಬಂದ ಬಸ್ಸಿಗೆ ನಾನೇ ಮೊದಲು ಲಗುಬಗೆ ಇಂದ ಹತ್ತಿದೆ ಆದರೆ ನೀ ಹತ್ತಲಿಲ್ಲ. ಸರಿ ಸಿಕ್ಕ ಸೀಟನ್ನು ಬಿಟ್ಟು ಕೆಳಗಿಳಿದೆ. ನನ್ನ ಕಂಡ ನೀನು ಕರೆದ ನನ್ನ ಮಂದಸ್ಮಿತೆಯಾಗಿ. ಅದು ಇದು ಮಾತನಾಡಿದ್ದು ಆಯಿತು ಅಸ್ತು ಹೊತ್ತಿಗೆ ಬಂತು ಮತ್ತೊಂದು ಬಸ್ಸು. ಬೇಗನೆ ಬಸ್ಸು ಹತ್ತಿ ಸೀಟು ಕಾಯ್ದಿರಿಸಿ ಕುಳಿತೆ. ಆದರೆ ಕುಳಿತೆ ನೀನು ಬೇರೊಬ್ಬ ಕಾಯ್ದಿರಿಸಿದ ಸಿಟಲ್ಲಿ. ನಿನ್ನ ಕಂಡ ಮಾತನಾಡಿದ ಖುಷಿ ಜರ್ರನೆ ಇಳಿದು ಹೋಯಿತು. ದುರ್ಗದಲ್ಲಿ ಇಳಿದಾಗ ದುರ್ಗಾ ಕಂಡಿತು ಬೋಳಾಗಿ.

ಹೃದಯದಿಂದ

ನಾ