Thursday 10 November, 2011

ಹಾಗೆ ಸುಮ್ಮನೆ ...

ನಿನ್ನ ದ್ವೆಷಿಸಲೆಂದೇ
ಹುಡುಕಿದ ಕಾರಣಗಳು
ನೆಪವಾದವು
ನಿನ್ನ ಪ್ರೀತಿಸಲು ,,,

~"~"~"~"~"~"~"~"~"~

ಕಾಡುವ ನೆನಪುಗಳನ್ನ
ಮರಯಲೆಂದೇ
ಕಾಡಿಗೆ ಹೋದರು
ಕಾಡುತಿವೆ ನೆನಪಾಗಿ
ನಿನ್ನ 
ಕಾಡಿಗೆ  ಕಂಗಳು...

Friday 12 December, 2008

ಕುಡುಕನೋರ್ವನ ಪುಟಗಳಿಂದ

ಕುಡುಕನಿಗಸ್ಟೆ ಗೊತ್ತು ಕುಡಿತದ ಗಮ್ಮತ್ತು
ಕುಡಿಯದಿದ್ದವರಿಗೆ ಏನು ಗೊತ್ತು ಅದರ ಕಿಮ್ಮತ್ತು
ಕುಡಿದಾಗಲು ನೆಟ್ಟಗಿದ್ದರೆ ನಿಮ್ಮ ನಿಯತ್ತು
ತೋರಿಸುತ್ತದೆ ನಿಮ್ಮಯ ತಾಖತ್ತು.
*~*~*~*~*~*~*~*~*~*~*~*~*~*~*

ಚಿಗುರೆ ಕಂಗಳ ಚೆಲುವೆ
ನನಗಿನ್ನೂ ಅರ್ಥವಾಗಿಲ್ಲ
ನನಗೆ ಮತ್ತು ಏರಿದ್ದು
ಕುಡಿದ ಅಮಲಿನಿಂದಲೋ
ಅಥವಾ ನಿನ್ನ ಕಣ್ಣ ಕುಡಿ ನೋಟದಿಂದಲೋ ,,,
*~*~*~*~*~*~*~*~*~*~*~*~*~*~*
ಮಾನಿನಿಯ ಮೋಹ
ಮದಿರೆಯ ದಾಹ
ಮನ ಮಣಿಯುವುದು ಯಾವುದಕ್ಕೋ?
ಆದರೆ ಒಂದೊಂತು ಗೊತ್ತು
ಯಾವುದಕ್ಕೆ ಮಣಿದರು ಏರುವುದು ಮತ್ತು .
~*~*~*~*~*~*~*~*~*~*~*~*~

Wednesday 10 September, 2008

ನಿನ್ನದೇ ನೀರಿಕ್ಷೆಯಲ್ಲಿ,,,,,




ಚಿಗುರೆಗಂಗಳ ಚೆಲುವೆ ,
ತುಂಬಾ ದಿನಗಳ ನಂತರ ಬರೀತಾ ಇದ್ದೀನಿ ಕಣೆ, ಮತ್ತೇನು ಕಾರಣ ಅಂತ ಕೇಳಬೇಕಾಗಿಲ್ಲ ತಾನೆ, ಇನ್ನೇನು ಇರುತ್ತೆ ನನ್ನಂಥವನಿಗೆ ನಿನ್ನದೇ ಧ್ಯಾನ ಬಿಟ್ಟರೆ. ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ನನ್ನ ಮನಸ್ಸಿನಲ್ಲಿ ನಿನ್ನದೇ ನೆನಪುಗ ಜಡಿ ಮಳೆ ಹಿಡಿದು ಬಿಟ್ಟಿದೆ. ಹೊರಗೆ ಸುರಿವ ಮಳೆ ಇಳೆಯ ಕೊಳೆಯನೆಲ್ಲ ತೊಳೆದು ನವ ವದುವಿನಂತೆ ಕಂಗೊಳಿಸುವಂತೆ ಮಾಡಿದ್ದರೆ, ನಿನ್ನ ಮಧುರ ನೆನಪುಗಳು ನನ್ನೀ ಮನದಲ್ಲಿ ಬೆಚ್ಚನೆಯ ಭಾವ ತಂದಿಟ್ಟುಈ ಜಗತ್ತಿಗೆ ಹೊಸ ಪ್ರೇಮ ಕಾವ್ಯ ಬರೆಯುವಂತೆ ಕಾಡುತ್ತಿವೆ.



ಪ್ರತೀ ಸಾರಿ ನನ್ನ ನಾ ಕನ್ನಡಿಯಲ್ಲಿ ನೋಡಿಕೊಂಡಾಗಲು ಆ ಬ್ರಹ್ಮನನ್ನು ಬೈದುಕೊಳ್ಳುತಿದ್ದ ನಾನು, ಮೊದಲ ಸಲ ಬ್ರಹ್ಮನ ಸೃಷ್ಟಿ ಇಷ್ಟು ಅದ್ಬುತವಾಗಿರುತ್ತದೆಂದು ತಿಳದದ್ದು ತುಂತುರು ಮಳೆಯ ಹನಿಯಲ್ಲಿ ನೆನೆಯುತ್ತಾ ಹಾಡನ್ನು ಗುನುಗುತ್ತಿದ್ದ ನಿನ್ನ ನೋಡಿದಾಗಲೇ. ಕಲಾವಿದ ತನ್ನ ಮಹಾತ್ವಾಕಾಂಕ್ಷೆಯ ಚಿತ್ರ ಬರೆಯುವಂತೆ ನಿನ್ನ ಅದೆಸ್ಟು ನಾಜೂಕಾಗಿ ತಿದ್ದಿ ತೀಡಿ ಧರೆಗಿಳಿಸಿದ್ದಾನೆ. ನಿನ್ನ ಕಂಡ ಆ ಕ್ಷಣದಿಂದ ಬ್ರಹ್ಮನ ಮೇಲಿದ್ದ ಕೋಪ ಮಂಜಿನಂತೆ ಕರಗಿ ಹೋಯಿತು. ನಿಜಕ್ಕೂ ಅವತ್ತಿಂದ ಅವನು ನನ್ನ ಆರಾಧ್ಯ ದೈವವಾಗಿ ಬಿಟ್ಟಿದ್ದಾನೆ.



ನೈದಿಲೆಯೇ ಕಣ್ಣಾಯಿತೋ
ಲತೆಯೊಂದು ನಡುವಾಯಿತೋ
ಬೆಳದಿಂಗಳೇ ಹೆಣ್ನಾಯಿತೋ .
ಏನೆಂದು ವರ್ಣಿಸಲಿ ನಿನ್ನ
ಹೇಳೇ ನನ್ನ ಚಿನ್ನ.



ಸರ್ವ ಸಂಗ ಪರಿತ್ಯಾಗಿಯಾಗಲು ಹೊರಟವನಿಗೆ ನೀನೆ ಸರ್ವಸ್ವ ಎನ್ನಿಸುವಂತೆ ಮಾಡಿದೆ. ಅದೇನು ಮೋಡಿ ಅಡಗಿದೆ ಆ ನಿನ್ನ ಕಂಗಳಲ್ಲಿ .ಹುಣ್ಣಿಮೆ ಚಂದ್ರನ ಬೆಳಕಿಗೆ ಸಮುದ್ರದ ಅಲೆಗಳು ಭೋರ್ಗರೆಯುವಂತೆ , ನನ್ನ ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಸುಪ್ತ ಭಾವನೆಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಬಿರುಗಾಳಿಯಂತೆ ಅಲೆದು ಕೊಂಡಿದವನು ನಾನು, ಎಲ್ಲರು ಇಷ್ಟ ಪಡುವ ತಂಗಾಳಿಯಗಿಸಿದೆಯಲ್ಲ ಎಲ್ಲಿತ್ತೆ ನಿನ್ನಲ್ಲಿ ಆ ಮಾಯಾ ಶಕ್ತಿ.



ಅದೇಕೆ ಇದ್ದಕಿದ್ದ ಹಾಗೆ ನನ್ನ ಒಬ್ಬನ್ನನ್ನೇ ಒಬ್ಬಂಟಿಯಾಗಿ ಬಿಟ್ಟು ದೂರ ಹೋದೆ. ನಾ ಮಾಡಿದ ತಪ್ಪಾದರೂ ಏನು? ನನ್ನ ಬಾಳಿನ ಬೆಳಕಾಗುವೆಯ ಎಂದು ಕೇಳಿದ್ದೆ ತಪ್ಪಯಿತಾ?. ಅಂದು ದೂರ ಸರಿದು ಹೋದವಳು ಇನ್ನು ಹಿಂತಿರುಗಿ ಬರಲಿಲ್ಲ. ಆದರು ನಿನಾಗಾಗೆ ಕಾಯುತ್ತಿದ್ದೇನೆ ನೀ ಬರುವ ಹಾದಿಯಲ್ಲಿ ನಿನ್ನದೇ ನೀರಿಕ್ಷೆಯಲ್ಲಿ..... ಹಿಡಿ ಎಷ್ಟು ಹೃದಯದಲ್ಲಿ ಸಾಗರದಸ್ಟು ಪ್ರೀತಿ ತುಂಬಿ ನಿನಾಗಾಗೆ ಕಾದಿದ್ದೇನೆ....

ಎಂದೆಂದೂ ನಿನ್ನವ......

Thursday 17 July, 2008

ಹೀಗೆ ಸುಮ್ಮನೆ ....


ಹುಂಬ
ವ್ಯಥೆಯೇ ಅದರ ಅರ್ಥವೂ ಗೊತ್ತಿಲ್ಲ
ನನ್ನಸ್ಟು ಸುಖವ ಸೂರೆಗೈದವರಿಲ್ಲ,
ನನ್ನ ಬಳಿ ಬರಲು ಚಿಂತೆಗೂ ಚಿಂತೆಯ ವಿಷಯ
ಏಕೆಂದರೆ ನಾನೆಂದರೆ ದುಃಖಕ್ಕೂ ಭಯ.

~~*~*~*~*~*~*~*~*~*~~*~*~*~*~*~*~


ಅರ್ಥವಿಲ್ಲ
ಹಸು, ಎಮ್ಮೆ,
ಹೆಣ್ಣ ಈದರೆ
ಪಡುವಿರೆಲ್ಲ ಸಂತೋಷವ
ಹೆಣ್ಣು, ಹೆಣ್ಣ
ಹಡೆದರೆ
ಪಡುವಿರೆತಕೆ ದುಃಖವ?!!!!!



ಹೃದಯದಿಂದ
ನಾ

Tuesday 15 July, 2008

ತೋಚಿದ್ದು ......ಗೀಚಿದ್ದು....

ನೀ
ನೋವಲ್ಲೆ ಕವಿತೆ
ಅರಳುವುದಂತೆ,
ನೀ ಸದಾ ಸುಖವನ್ನೇ
ನೀಡುತಿದ್ದರೆ
ಹೇಗೆ
ಬರೆಯಲಿ
ನಾ ಕವಿತೆ .


ನಾ-ಅವಳು
ನಾನೆಂದೆ
"ನಿನ್ನ ವಜ್ರವು ಸುಟ್ಟರೆ
ಇದ್ದಿಲು "
ಅವಳೆಂದಳು
"ನಿನ್ನ ಪುಸ್ತಕಕ್ಕೂ ಹಿಡಿಯುತ್ತೆ
ಗೆದ್ದಿಲು."

ಹೃದಯದಿಂದ
ನಾ



Saturday 12 July, 2008

"ಅವಳು"

ದಿನ ಶುಭದಿನ. ನನ್ನ ಜೀವನದ ಅತ್ಯಂತ ಸಂತೋಷದ ದಿನ. ಅನಿರೀಕ್ಷಿತವಾಗಿ ಅವಳು ಸಿಕ್ಕಳು, ಕನಸಿನಲ್ಲೂ ಕಂಡಿರಲಿಲ್ಲ ಈ ದಿನ ಸಿಗುವಳೆಂದು ಬರೀ ಕಾಣಲಿಲ್ಲ, ಕಂಡೂ ಕರೆದೂ ಮಾತನಾಡಿಸಿದಳು. ಮರೆಯಲಾರೆ ಈ ದಿನವ.

ನನ್ನ ಜೀವನದ ವಸಂತ ಚಿಗುರಿತು
ಕೋಗಿಲೆ ಗಾನದಂತೆ ನಿನ್ನ ಮಾತು ಕೇಳಿಸಿತು
ನಿನ್ನ ನುಡಿಗಳು ಹೃದಯವನು ತಾಕಿತು
ಮನಸೆಲ್ಲ ಆನಂದದಿಂದ ಅರಳಿತು .

ದಿನ ಲೇಟಾಗಿ ಏಳುವ ನಾನು ಈ ದಿನ ಬೆಳಗ್ಗೆ ಬೇಗನೆ ಎದ್ದೆ ಕಾರಣ ನೀನೇ ,ದುರ್ಗಕ್ಕೆ ಹೋಗುವ ನಿನ್ನ ಕಾಣುವ ಹಂಬಲ. ಓಡೋಡಿ ಬಂದೆ ಬಸ್ ಸ್ಟ್ಯಾಂಡ್ ಗೆ ಬಂದೆನೀನು ಕಾಣಲಿಲ್ಲ ನೀನು, ಸಪ್ಪಗಾಗಿತು ಮನಸು, ಎಲ್ಲಿ ನೀನು ಹೊರಟು ಹೋದೆಯೋ ಎಂದು, ಆದರು ಕಾದೆ. ಕೊನೆಗೂ ಬಂದೆ, ನಿನ್ನ ಕಂಡ ಕ್ಷಣ ಬಡಿಯಿತು ನನ್ನ ಹೃದಯ ನಿಮಿಷಕ್ಕೆ ನೂರು ಬಾರಿ.


ಅಪ್ಪ ಪೂನಾದಿಂದ ಫೋನ್ ಮಾಡಿದ್ದರು ದುರ್ಗಕ್ಕೆ ಹೋಗಿ ದುಡ್ಡು ಕಟ್ಟಿ ಬಾ ಎಂದರು. ಪ್ರಯಾಣ ಮಾಡಲು ಬೇಸರ ಅದರೂ ನೀನು ಹೋಗುವೆಯೆಲ್ಲ ಅದೇ ಖುಷಿ ಸರಿ ಎಂದು ತಡಮಾಡದೆ ಹೇಳಿದೆ. ಇಂದು ಸಹ ಬಗನೆ ಎದ್ದು ಬೇಗ ಬೇಗನೆ ರೆಡಿಯಾಗಿ ಬಂದು ನಿಂತೇ. ಯಥಾಪ್ರಕಾರ ನೀನಿನ್ನೂ ಬಂದಿರಲಿಲ್ಲ, ಅಲ್ಲೇ ಸನಿಹದ ಬೇಕರಿ ಬಳಿ ನೀನು ಬಂದರು ನೀನಗೆ ಕಾಣದ ಹಾಗೆ ನಿಂತೇ. ನೀನು ಬಂದು ಕಾಯುತ್ತ ಕುಳಿತೆ ಬಸ್ಸನ್ನ. ಅಂತು ಬಂದ ಬಸ್ಸಿಗೆ ನಾನೇ ಮೊದಲು ಲಗುಬಗೆ ಇಂದ ಹತ್ತಿದೆ ಆದರೆ ನೀ ಹತ್ತಲಿಲ್ಲ. ಸರಿ ಸಿಕ್ಕ ಸೀಟನ್ನು ಬಿಟ್ಟು ಕೆಳಗಿಳಿದೆ. ನನ್ನ ಕಂಡ ನೀನು ಕರೆದ ನನ್ನ ಮಂದಸ್ಮಿತೆಯಾಗಿ. ಅದು ಇದು ಮಾತನಾಡಿದ್ದು ಆಯಿತು ಅಸ್ತು ಹೊತ್ತಿಗೆ ಬಂತು ಮತ್ತೊಂದು ಬಸ್ಸು. ಬೇಗನೆ ಬಸ್ಸು ಹತ್ತಿ ಸೀಟು ಕಾಯ್ದಿರಿಸಿ ಕುಳಿತೆ. ಆದರೆ ಕುಳಿತೆ ನೀನು ಬೇರೊಬ್ಬ ಕಾಯ್ದಿರಿಸಿದ ಸಿಟಲ್ಲಿ. ನಿನ್ನ ಕಂಡ ಮಾತನಾಡಿದ ಖುಷಿ ಜರ್ರನೆ ಇಳಿದು ಹೋಯಿತು. ದುರ್ಗದಲ್ಲಿ ಇಳಿದಾಗ ದುರ್ಗಾ ಕಂಡಿತು ಬೋಳಾಗಿ.

ಹೃದಯದಿಂದ

ನಾ